ಆಮೂರ್ ನದಿ-
ಪೂರ್ವ ಏಷ್ಯಾದ ಮುಖ್ಯ ನದಿ. ಉದ್ದ 3000ಮೈ. ಪಶ್ಚಿಮದಿಂದ ಪೂರ್ವಕ್ಕೆ ಹರಿದು ಪೆಸಿಪಿಕ್ ಸಾಗರವನ್ನು ಸೇರುತ್ತದೆ. ಷಿಲ್ ಮತ್ತು ಆರ್ಗನ್ ಉಪನದಿಗಳು. 17ನೆಯ ಶತಮಾನದಲ್ಲಿ ರಷ್ಯ ಪ್ರಬಲ ರಾಷ್ಟ್ರವಾಗಲು ಪ್ರಾರಂಭಿಸಿದಂದಿನಿಂದ ಈ ನದಿಯ ಪ್ರಾಮುಖ್ಯ ಹೆಚ್ಚಿದೆ. ಬೇಸಿಗೆಯಲ್ಲಿ ಮಳೆಯಿಂದಾಗಿ ತುಂಬ ಪ್ರವಾಹವಿರುತ್ತದೆ. ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುತ್ತದೆ. ಚಿಕ್ಕ ದೋಣಿಗಳ ಸಂಚಾರ 2,000 ಮೈಲುವರೆಗೂ ನಡೆಯಬಹುದು. ಈಚೆಗೆ ವಿದ್ಯುತ್ತಿಗಾಗಿ ನದೀಜಲವನ್ನು ಬಳಸಿಕೊಳ್ಳುವ ಪ್ರಯತ್ನ ನಡೆದಿದೆ.											
(ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ